ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಒಂದೇ ವೇದಿಕೆಯಲ್ಲಿ ಹತ್ತು ಭಾಗವತರು

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಬುಧವಾರ, ಸೆಪ್ಟೆ೦ಬರ್ 16 , 2015
ಸೆಪ್ಟೆ೦ಬರ್ 16, 2015

ಒಂದೇ ವೇದಿಕೆಯಲ್ಲಿ ಹತ್ತು ಭಾಗವತರು

ಶಿರಸಿ : ಯಕ್ಷಗಾನ ಕಲೆಯ ವಿವಿಧೆಡೆಯ ಹತ್ತು ಮಂದಿ ಒಂದೇ ವೇದಿಕೆಯಲ್ಲಿ ಕುಳಿತು ಭಾಗವತಿಕೆಯ ವಿಶೇಷತೆಯನ್ನು ಸಾದರಪಡಿಸಿದ ಮತ್ತು ಅನುಭವ, ಅನಿಸಿಕೆ ಹಂಚಿಕೊಂಡ ಅಪರೂಪದ ಕಾರ್ಯಕ್ರಮವೊಂದು ಸ್ವರ್ಣವಲ್ಲಿ ಸಂಸ್ಥಾನದ ಸುಧರ್ಮಾ ಸಭಾಂಗಣದಲ್ಲಿ ಗಮನ ಸೆಳೆಯಿತು.

ಯಕ್ಷ ಶಾಲ್ಮಲಾ ಸಂಸ್ಥೆಯು ಈ ಬಾರಿ ಹಮ್ಮಿಕೊಂಡ ಗೀತ ನತ್ಯಾನುಸಂಧಾನದ ಮೂರು ದಿನಗಳ ಕಾರ್ಯಾಗಾರದ ಮುಕ್ತಾಯದ ದಿನ ಇಂಥದೊಂದು ವಿಶಿಷ್ಟ ಸಂಯೋಜನೆ ಮಾಡಲಾಗಿತ್ತು. ಯಕ್ಷಗಾನ ಕಲಾ ಕ್ಷೇತ್ರದ ಇತಿಹಾಸದಲ್ಲಿ ದಾಖಲಾಗುವಂತೆ ಹಿಮ್ಮೇಳದ ದಿಗ್ಗಜ ಕಲಾವಿದರೆಲ್ಲ ಒಂದೇ ವೇದಿಕೆಯಡಿ ಸಮಾಗಮಗೊಂಡಿದ್ದು ವಿಶೇಷವಾಯಿತು. ಯಕ್ಷಗಾನದ ಹಿಮ್ಮೇಳದ ಮೇರು ಕಲಾವಿದರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನೆಬ್ಬೂರು ನಾರಾಯಣ ಭಾಗವತ, ಸುಬ್ರಹ್ಮಣ್ಯ ಧಾರೇಶ್ವರ, ಸುಬ್ರಾಯ ಭಾಗವತ ಕಪ್ಪೆಕೇರೆ ಈ ವೇದಿಕೆಯಲ್ಲಿದ್ದರು. ಅಲ್ಲದೇ ಕೆ.ಪಿ.ಹೆಗಡೆ ಗೋಳಗೋಡ, ಗಣಪತಿ ಭಟ್ಟ ಮೊಟ್ಟೆಗದ್ದೆ, ಕೇಶವ ಹೆಗಡೆ ಕೊಳಗಿ, ರಾಮಕಷ್ಣ ಹಿಲ್ಲೂರು, ತಿಮ್ಮಪ್ಪ ಭಾಗವತ ಬಾಳೆಹದ್ದ, ಸತೀಶ ಹೆಗಡೆ ದಂಟ್ಕಲ್, ಅನಂತ ಹೆಗಡೆ ದಂತಳಿಕೆ ಪಾಲ್ಗೊಂಡು ಏಕಕಾಲಕ್ಕೆ ಭಾಗವತಿಕೆಯ ವೆವಿಧ್ಯ ಪ್ರದರ್ಶಿಸಿದರು.

ಈ ಭಾಗವತರುಗಳಿಗೆ ಸಾಥ್ ನೀಡಲು ಹೆಸರಾಂತ ಮದಂಗ ಕಲಾವಿದರಾದ ಶಂಕರ ಭಾಗವತ, ಗಣಪತಿ ಭಾಗವತ ಕವಾಳೆ, ನರಸಿಂಹ ಭಟ್ಟ ಹಂಡ್ರಮನೆ, ಚಂಡೆದ ವಾದಕ ವಿಘ್ನೇಶ್ವರ ಕೆಸರಕೊಪ್ಪ ಪಾಲ್ಗೊಂಡರು. ಹಿಮ್ಮೇಳದ ಈ ಎಲ್ಲ ಕಲಾವಿದರ ಗಾಯನ-ಞ;ವಾದನದ ಪರಿಣಿತಿಯು ಪ್ರೇಕ್ಷಕರಿಗೆ ವೆವಿಧ್ಯ ರಸಭಾವಗಳ ಭಾಗವತಿಕೆಗೆ ತಕ್ಕಂತೆ ಮದಂಗದ ಬಿಡ್ತಿಗೆ, ಅದಕ್ಕೆ ಕಡಿಮೆ ಇಲ್ಲದಂತೆ ಚಂಡೆ ಅಬ್ಬರವು ಗಮನ ಸೆಳೆಯಿತು.ಸುಮಾರು ಎರಡು ತಾಸಿಗೂ ಅಧಿಕ ಕಾಲ ನಡೆದ ಯಕ್ಷ-ಗಾನ ವೆವಿಧ್ಯ ನೆಬ್ಬೂರರ ಹಾಡಿನೊಂದಿಗೆ ಮುಕ್ತಾಯವಾಯಿತು.

ಈ ಹಿಮ್ಮೇಳ ವೆಭವ ಪ್ರದರ್ಶನ ವೀಕ್ಷಿಸಿದ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು ಕಾರ್ಯಕ್ರಮದ ಸೊಗಸಾದ ಪ್ರಸ್ತುತಿಗೆ ಶ್ಲಾಘನೆ ವ್ಯಕ್ತಪಡಿಸಿದರು. ಅಲ್ಲದೇ ಮನಗಂಡು ಸುಬ್ರಹ್ಮಣ್ಯ ಧಾರೇಶ್ವರ ಅವರಿಂದ ಮತ್ತೊಮ್ಮೆ ಭಾಗವತಿಕೆ ಮಾಡಿಸಿದ್ದು ಆಸ್ವಾದಿಸಿದರು.

ಕಾರ್ಯಕ್ರಮದಲ್ಲಿ ಯಕ್ಷಋಷಿ ಮಂಜುನಾಥ ಭಾಗವತ ಹೊಸ್ತೋಟ, ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ವಿದ್ವಾಂಸ ಜಿ.ಎಸ್.ಭಟ್ಟ ಮೆಸೂರು, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಯಕ್ಷಗಾನ ಸಂಶೋಧಕ ವಸಂತ ಭಾರದ್ವಾಜ, ವಿದ್ವಾಂಸ ಎಂ.ಎ.ಹೆಗಡೆ ದಂಟ್ಕಲ್, ಯಕ್ಷ ಶಾಲ್ಮಲಾ ಸಂಘಟನೆಯ ಪದಾಧಿಕಾರಿಗಳು ಸೇರಿದಂತೆ ಅನೇಕರು ಪಾಲ್ಗೊಂಡರು.

ಸಮಾರೋಪ ಸಮಾರಂಭದ ನಂತರದಲ್ಲಿ ಪ್ರೊ.ಎಂ.ಎ.ಹೆಗಡೆ ರಚಿತ ಲವ-ಞ;ಕುಶ ಆಖ್ಯಾನದ ಯಕ್ಷಗಾನ ಆಟವನ್ನು ಕಲಾವಿದರು ಸಾದರಪಡಿಸಿದರು. ಪಾತ್ರಧಾರಿಗಳಾಗಿ ಗೋಡೆ ನಾರಾಯಣ ಹೆಗಡೆ, ವಿನಾಯಕ ಹೆಗಡೆ ಕಲ್ಲಗದ್ದೆ, ರಾಜೇಶ ಭಂಡಾರಿ, ಚಂದ್ರಹಾಸ ಗೌಡ, ಶ್ರೀಧರ ಹೆಗಡೆ ಚಪ್ಪರಮನೆ, ಗಣಪತಿ ಭಟ್ಟ ಮುದ್ದಿನಪಾಲು, ಸಂತೋಷ ಕಡಕಿನಬೆಲ, ವೆಂಕಟರಮಣ ಹೆಗಡೆ ಮುಂತಾದವರು ಅಭಿನಯಿಸಿದರು.


ಕೃಪೆ : vijaykarnataka.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ